Tuesday, 12 February 2013

ತಲ್ಲಣಿಸುವುದು ಈ ಹೃದಯ
ನೀ ಎದುರಲ್ಲಿ ಕಂಡಾಗ
ಭಾವನೆಗಳ ಅಬ್ಬರದ ಹೊಯ್ದಾಟ
ನೀ ನನ್ನ ಕರೆದಾಗ
ತನುಮನದಲ್ಲಿ ರೋಮಾಂಚನವು
ನೀ ನನ್ನತ್ತ ಸುಳಿದಾಗ
ಹೇಳಲಾಗದ ಈ ಹಿತವಾದ ಯಾತನೆಗೆ
ಕೊನೆ ಎಂಬುದು ಯಾವಾಗ?





ಕೊಚ್ಚಿ ಹೋಗಲಿ ಹುಚ್ಚು ಪ್ರೀತಿ
ಮೂಕವೇದನೆಯ ಅಲೆಗಳಲ್ಲಿ
ಉಳಿಯಲು ಮಧುರ ನೆನಪುಗಳು
ಮನದ ಪರದೆಯ ಹಿಂಬದಿಯಲ್ಲಿ
ಎದೆಯಲ್ಲೇ ಸಮಾಧಿಯಾದರೂ
ಗುಟ್ಟಾಗಿ ಬಚ್ಚಿಟ್ಟುಕೊಂಡ ಪ್ರೀತಿ
ಸಾಯಲಾರದು ಎಂದೆಂದೂ ಸವಿ
ಒಲವಿನ ಸಿಹಿ ಅನುಭೂತಿ

Sunday, 3 February 2013

ಏನೆಂದು ತಿಳಿಹೇಳಲಿ ಓ ಗೆಳೆಯ?
ಭಾವನೆಗಳ ಹೊಯ್ದಾಟದ ಕುರಿತು
ಸೋತುಹೋಗಿರುವ ನಾ ಎಂದೋ
ಕಣ್ಣುಮುಚ್ಚಾಲೆಯ ಮೋಹದಾಟದಲ್ಲಿ
ಕಳೆದುಹೋಗಿದೆ ನನ್ನೀ ಮನಸು
ಹಾಲಿನಲ್ಲಿ ಬೆರೆತಿಹ ನೀರಿನಂತೆ
ಹತ್ತಿಕ್ಕಲಾಗದ ಒಲವಿನ ಪ್ರವಾಹಕ್ಕೆ
ನುಚ್ಚುನೂರಾಗಿದೆ ಈ ಪುಟ್ಟ ಹೃದಯವು
ಶೂನ್ಯವಾಗಿದೆ ಕಂಗಳ ಕಾಂತಿಯು
ಪ್ರತೀಕ್ಷೆಯ ಕಣ್ಣೀರಿನ ಹೊಳೆಯಲ್ಲಿ ಮಿಂದು
ಮಿಡಿಯುತಿದೆ ಬಿಸಿಉಸಿರು ಮಾತ್ರ
ನಿನ್ನ ಪ್ರೇಮದ ನಿರೀಕ್ಷೆಯಲ್ಲಿ..........